ವಾಕ್ ಚಮತ್ಕಾರದಲ್ಲಿ ಜಗ್ಗೇಶ್, ಹಾಟ್ ಪರ್ಪಾರ್ಮನ್ಸ್ ನೀಡಿದ ರಾಗಿಣಿ ದ್ವೀವೇದಿ ಜೂನ್ ೨೫ ಮತ್ತು ೨೬ ರಂದು ಸಂಜೆ ೬ಕ್ಕೆ
ಸತತವಾಗಿ ೯ವರ್ಷಗಳಿಂದ ಕನ್ನಡಿಗರಿಗೆ ನಾನ್ ಸ್ಟಾಪ್ ಮನರಂಜನೆಯನ್ನು ನೀಡುತ್ತಾ ಬಂದ ಜನಮನಗೆದ್ದ ಸುವರ್ಣ ವಾಹಿನಿಯ ಕಾರ್ಯಕ್ರಮಗಳಿಗೆ ಹಾಗೆ ವೀಕ್ಷಕರನ್ನು ರಂಜಿಸಿದ ಸುವರ್ಣ ಪರಿವಾರದ ಸದಸ್ಯರನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಉತ್ಸವ ೪ನೇ ಸುವರ್ಣ ಪರಿವಾರ ಅವಾರ್ಡ್ಸ್ ೨೦೧೬ ಇದೇ ಜೂನ್ ೨೫ ಮತ್ತು ೨೬ರಂದು ಸಂಜೆ ೬ಗಂಟೆಗೆ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿದೆ.
ಸುವರ್ಣ ಸ್ಟಾರ್ಗಳ ಯಶಸ್ಸಿನ ಹಾದಿಯಲ್ಲಿ ಹೈ ಸ್ಪೀಡ್ ಮನರಂಜನೆಯ ಮಹಾ ಸಾಗರದ ಮಧ್ಯೆ ಭವ್ಯ ವೇದಿಕೆಯಲ್ಲಿ ೪ನೇ ಸುವರ್ಣ ಪರಿವಾರ ಅವಾರ್ಡ್ಸ್ ಗೆ ಮತ್ತಷ್ಟು ಮೆರಗು ನೀಡಿದ್ದು ಸ್ಯಾಂಡಲ್ವುಡ್ ಸ್ಟಾರ್ಗಳು.ಒಬ್ಬರಾದ ಮೇಲೆ ಒಬ್ಬರಂತೆ ವೇದಿಕೆಗೆ ಆಗಮಿಸಿದ ಕನ್ನಡ ಚಿತ್ರರಂಗದ ದಿಗ್ಗಜರಿಂದ ಸ್ಟೇಜ್ ಇನ್ನಷ್ಟು ಕಲರ್ಫುಲ್ ಆಗಿ ಕಾಣಿಸಿದೆ. ಸುವರ್ಣ ಪರಿವಾರದ ಈ ಸುಂದರ ಹಬ್ಬ ಸ್ಟಾರ್ಗಳಿಂದ ಶೋಭಿಸಿದೆ.
ಮಾತಿನ ಮಲ್ಲ,ಚಾಣಾಕ್ಷ ನವರಸ ನಾಯಕ ಜಗ್ಗೇಶ್ ತಮ್ಮ ವಾಕ್ಚಾತುರ್ಯ್ಯದಿಂದ ನಗೆ ಹಬ್ಬ ನೀಡಿ ಎಲ್ಲರ ನಗುವಿಗೆ ಕಾರಣರಾದರು. ರಾಗಿಣಿ ದ್ವೀವೇದಿ ತಮ್ಮ ಹಾಟ್ ಫುಲ್ ಪರ್ಪಾರ್ಮಮ್ಸ್ ನೀಡಿ ಪಡ್ಡೆ ಹೈಕಳ ಹಾರ್ಟ ಬೀಟ್ನ್ನು ಕುಣಿಯುವಂತೆ ಮಾಡಿದ್ದಾರೆ.
ಈ ಸಂಭ್ರಮಕ್ಕೆ ನವ ಜೋಡಿ ರಘು ಮುಖರ್ಜಿ ಮತ್ತು ಅನು ಪ್ರಭಾಕರ ಆಗಮಿಸಿ ಮತ್ತಷ್ಟು ಮೆರಗು ತಂದಿದ್ದಾರೆ. ಅಷ್ಟಲ್ಲದೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸರ್ ಸುವರ್ಣ ಪರಿವಾರದ ಬಗೆಗೆ ಇದೇ ಸಂದರ್ಭದಲ್ಲಿ ಕೊಂಡಾಡಿದ್ದಾರೆ.
ಇತ್ತೀಚಿನ ಯಂಗ್ ಸ್ಟಾರ್ಗಳಾದ ವಿಜಯ ಸೂರ್ಯ,ಶ್ರದ್ಧಾ ಈ ವೇದಿಕೆಯ ಮೇಲೆ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಸ್ವೀಟ್ ಹಾರ್ಟ್ ಸಂತೋಷನ ಮನದಾಳದ ಮಾತುಗಳು,ಹೀರಿಯ ನಟಿ ಅಮೃತವರ್ಷಿಣಿಯ ಶಕುಂತಲಾದೇವಿ ಹೇಮಾ ಚೌದ್ರಿಯವರ ಘನ ಉಪಸ್ಥಿತಿ ಈ ರಂಗುರಂಗಿನ ವೇದಿಕೆಗೆ ಮನಸೂರೆಗೊಳ್ಳುವಂತಿದೆ.
ಕಲಾವಿದರಿಗೆ ಸ್ಟಾರ್ಗಳಿಂದ, ಹಿರಿಯರಿಂದ ಮತ್ತು ಗಣ್ಯವ್ಯಕ್ತಿಗಳಿಂದ ನೀಡಿದ ಹೆಮ್ಮೆಯ ಹೊಗಳಿಕೆ ಈಡಿ ಸುವರ್ಣ ಪರಿವಾರಕ್ಕೆ ಸಂತಸತಂದಂತಾಗಿದೆ.
ಇಂತಹ ಅದ್ಭುತ,ಹೃದಯ ಸ್ಪರ್ಷಿಸಿದ ಕ್ಷಣಗಳು ಇದೇ ಜೂನ್ ೨೫ ಮತ್ತು ೨೬ರಂದು ಸಂಜೆ ೬ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.